ಅಬಕಾರಿ ವಾರ್ತೆ.....ಯಾಕೆ.....? ಏನು.....? ಹೇಗೆ.....?

 ಅಬಕಾರಿ ವಾರ್ತೆ.....ಇದು ಮದ್ಯ ಲೋಕದ ಕೈಗನ್ನಡಿಯಾಗಿದೆ. 

ಸಮಾಜದಲ್ಲಿ ಜನರನ್ನು, ಜನರ ಜೀವನದ  ಸ್ಥಿತಿಗತಿಗಳನ್ನು ಹಾಳು ಮಾಡಲು ಸಾಕಷ್ಟು ಪಿಡುಗುಗಳು ತಮ್ಮ ಅಟ್ಟಹಾಸ ಮೆರೆಯುತ್ತಿವೆ.  ಅದರಂತೆಯೇ ಸರಾಯಿ, ಹೆಂಡ, ವಿಸ್ಕಿ, ಬಿಯರ್, ವೈನ್ ಸೇರಿದಂತೆ ಅನೇಕ ಪ್ರಭೇದದ ಮದ್ಯವು ಇಂದು ಜನರನ್ನು ತನ್ನ ಕಪಿ ಮುಷ್ಟಿಯಲ್ಲಿ ಹಿಸುಕಿ, ಹಿಂಸುವುದರೊಂದಿಗೆ ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುತ್ತಿದೆ. 


ಇದಕ್ಕೆ ಪೂರಕ ಎಂಬಂತೆ ನಮ್ಮ ಸಮಾಜ ಹಾಗೂ ಸರಕಾರಗಳ ಒಂದಿಷ್ಟು ಭಾಗವು ಕೆಲಸ ಮಾಡುತ್ತಿರುವುದು ದುರ್ದೈವದ ಸಂಗತಿಯಾಗಿದೆ. ಹೀಗಾಗಿ ನಮ್ಮ ಈ "ಅಬಕಾರಿ ವಾರ್ತೆ"ಯು ಮದ್ಯ ಲೋಕದ ಕೈನಡಿಯಾಗಿ ಕೆಲಸ ಮಾಡುವ ಮೂಲಕ, ಜನರಿಗೆ ಮದ್ಯದಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಮತ್ತು ಜನರ ಹಾಗೂ ಸಮಾಜದ ಸ್ವಾಸ್ಥ್ಯ ಹಾಳಾಗುವುದರ ಬಗ್ಗೆ ಜಾಗೃತಿ ಮೂಡಿಸುವುದರ ಜೊತೆಗೆ ಅಬಕಾರಿ ಇಲಾಖೆಯ ಅಕ್ರಮ ಚಟುವಟಿಕೆಗಳ ಬಗ್ಗೆ ಮತ್ತು ಅಕ್ರಮ ಮದ್ಯ ಮಾರಾಟದ ಬಗ್ಗೆಯೂ ಜನರಿಗೆ ಮಾಹಿತಿ ನೀಡುವ ಕೆಲಸ ಮಾಡುತ್ತದೆ. 

ಜೊತೆಯಲ್ಲಿ ಅಕ್ರಮ ಮದ್ಯ ಮಾರಾಟದ ವಿರುದ್ಧ ಹೋರಾಟ, ಮದ್ಯ ಸೇವೆನೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಜಾಗೃತಿ, ವ್ಯಸನ‌ಮುಕ್ತ ಸಮಾಜದ ನಿರ್ಮಾಣದಂತಹ ಮಹತ್ವದ ಕಾರ್ಯಗಳನ್ನು ಈ ನಮ್ಮ " ಅಬಕಾರಿ ವಾರ್ತೆ"ಯ ತಂಡವು ಮಾಡುವುದರೊಂದಿಗೆ ಮದ್ಯ ಲೋಕದ ಕೈ ಗನ್ನಡಿಯಾಗಿ ಕೆಲಸ ಮಾಡಲಿದೆ.

ಹೀಗಾಗಿ ನಿಮಗೆ ಅಕ್ರಮ ಮದ್ಯ ಮಾರಾಟ ಕಂಡು ಬಂದಲ್ಲಿ ಮತ್ತು ಅಬಕಾರಿ ಇಲಾಖೆಯ ಭ್ರಷ್ಟಾಚಾರ ಕಂಡು ಬಂದಲ್ಲಿ ನಮ್ಮ "ಅಬಕಾರಿ ವಾರ್ತೆ" ಯ ತಂಡಕ್ಕೆ ತಿಳಿಸಿ ಮತ್ತು ಮದ್ಯ ನಿಷೇಧ ಚಳುವಳಿ ಹಾಗೂ ವ್ಯಸನ ಮುಕ್ತ ಸಮಾಜದ ನಿರ್ಮಾಣದ ನಮ್ಮ ಈ ಮಹತ್ವದ ಕಾರ್ಯದಲ್ಲಿ ಕೈ ಜೋಡಿಸಿ. 

                  ದೂರವಾಣಿ: 9449762791.

Post a Comment

أحدث أقدم
Loading...

Breaking News

ಭ್ರಷ್ಟರ ಬೇಟೆ
ಜಿಲ್ಲಾ ಸುದ್ದಿ is loading...