ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಅಕ್ರಮ‌ಮದ್ಯ ಮಾರಾಟ: ಪರೋಕ್ಷವಾಗಿ ಬೆಂಬಲಿಸುತ್ತಿರುವ ಅಬಕಾರಿ ಅಧಿಕಾರಿಗಳು

 ಬೆಂಗಳೂರು :ಹೊಸ ಬಾರ್‌ಗಳಿಗೆ ಪರವಾಣಿಗೆ ನೀಡದೇ ಹಳ್ಳಿಯಲ್ಲಿ ಅಕ್ರಮ ಮದ್ಯ ಮಾರಾಟ ತಡೆಯಲು ಸರಕಾರ ಭರವಸೆ ನೀಡಿದೆ ಓಕೆ. ಆದರೆ, ಇದರಲ್ಲಿ ಯಶಸ್ವಿಯಾಗುವುದೇ ? ಎಂಬ ಪ್ರಶ್ನೆಗೆ ಉತ್ತರ ಕಷ್ಟ.  

ಹೌದು, ಶರವೇಗದಲ್ಲಿ ಬೆಳೆಯುವ ಪಟ್ಟಣ, ನಗರ ಪ್ರದೇಶ ಸೇರಿದಂತೆ ಸುತ್ತಲಿನ ಗ್ರಾಮಗಳಲ್ಲಿ ಸುರಪಾನರು ಬೀದಿಗಳಲ್ಲಿ ಎಲ್ಲೆಂದರಲ್ಲಿ ಬಿದ್ದಿರುತ್ತಾರೆ. ಇನ್ನೂ ಕೆಲ ಕುಡಕರಿಂದ ಮಾರುಕಟ್ಟೆಯಲ್ಲಿ ಅವಾಚ್ಯ ಮಾರ್ಧನಿಸುತ್ತಿವೆ. ಶಾಂತಿ, ಸುವ್ಯವಸ್ಥೆಗೆ ಭಂಗವಾದರೂ ಯಾರೂ ಕ್ಯಾರೆ ಎನ್ನುತ್ತಿಲ್ಲ. ಬಡತನ ಕುಟುಂಬಗಳು, ಮುಗ್ದ ರೈತರು, ಕೃಷಿ ಕೂಲಿಕಾರ್ಮಿಕರು, ನೇಕಾರರು, ಶ್ರಮಿಕರು, ಕಟ್ಟಡ ನಿರ್ಮಾಣ ಕಾರ್ಮಿಕರು, ಚಾಲಕರು ಹಾಗೂ ಯುವಕರು ಸಾರಾಯಿ ಕುಡಿತಕ್ಕೆ ಸಿಕ್ಕು ತತ್ತರಿಸಿ ಬೀದಿ ಪಾಲಾಗುತ್ತಿದ್ದಾರೆ.

ಆದಾಯ ಗುರಿ ಆಪತ್ತು: ಕಳೆದ ಮೂರು ವರ್ಷದಿಂದ ಈ ವಿಚಾರದಲ್ಲಿ ಸರಕಾರ ಮತ್ತು ಅಬಕಾರಿ ಇಲಾಖೆ ಅಧಿಕಾರಿಗಳ ನಡುವೆ ಹಗ್ಗ ಜಗ್ಗಾಟ ನಡೆಯುತ್ತಿದೆ. ಅಕ್ರಮ ಮಾರಾಟಕ್ಕೆ ಕಡಿವಾಣ ಹಾಕಲು ಮಾತ್ರ ಇನ್ನೂವರೆಗೂ ಸಾಧ್ಯವಾಗಿಲ್ಲ. ಇದಕ್ಕೆ ಕಾರಣ ಅಬಕಾರಿ ಇಲಾಖೆಗೆ ನಿಗದಿಪಡಿಸಿದ ಮದ್ಯ ಮಾರಾಟದ ಗುರಿ. ಹೆಚ್ಚಾಗಿ ಆದಾಯ ಸಂಗ್ರಹಿಸಲು ಅಧಿಕಾರಿಗಳ ಮೇಲೆ ಒತ್ತಡ ಹೇರಲಾಗುತ್ತಿದೆ. ಇದರ ಪರಿಣಾಮ ಗುರಿ ಮೀರಿದ ಅಬಕಾರಿ ಆದಾಯ ಸಂಗ್ರಹವಾದರೂ ಅದಕ್ಕೆ ತಕ್ಕಂತೆ ಪಟ್ಟಣ, ನಗರ ಹಾಗೂ ಹಳ್ಳಿಗಳಲ್ಲಿ ಮದ್ಯದ ಅಕ್ರಮ ಮಾರಾಟ ಹೆಚ್ಚಾಗುತ್ತಲೇ ಇದೆ.  

ಬೊಕ್ಕಸಕ್ಕೆ ಆದಾಯ: ಸರಕಾರದ ಬೊಕ್ಕಸ ತುಂಬಿಸಲು ವಿವಿಧ ಮೂಲಗಳಿಂದ ಆದಾಯ ಸಂಗ್ರಹಿಸಲು ಮುಂದಾದ ಸರಕಾರ, ಕಣ್ಣಿಟ್ಟಿರುವದು ಅಬಕಾರಿ ಇಲಾಖೆ ಮೇಲೆ. ಹೀಗಾಗಿ ಪ್ರತಿವರ್ಷ ಇಲಾಖೆಗೆ ಆದಾಯ ಸಂಗ್ರಹ ಗುರಿ ಹೆಚ್ಚಿಸುತ್ತಲೇ ಇದೆ. ಆದರೆ ಗುರಿ ಸಾಧಿಸಲು ಹೊರಟ ಇಲಾಖೆ ಅಧಿಕಾರಿಗಳು ಅಕ್ರಮ ಮದ್ಯ ಮಾರಾಟ ನಿಷೇಧಿಸಲು ಅಸಹಾಯಕರಾದರು. ಹೀಗಾಗಿ ಸರಕಾರ ಆದಾಯಕ್ಕೆ ಅಬಕಾರಿ ಇಲಾಖೆ ಜುಟ್ಟು ಹಿಡಿದರೆ ಇಲಾಖೆ ಹೆಚ್ಚು ವರಮಾನ ತರುವಂತೆ ಅಧಿಕಾರಿಗಳ ಮೇಲೆ ಕುಳಿತಿದೆ. ಜಿಲ್ಲಾ, ತಾಲೂಕು ಮಟ್ಟದ ಅಧಿಕಾರಿಗಳಿಗೆ ಇಂತಿಷ್ಟೇ ಬಾಕ್ಸ್ ಮದ್ಯ ಮಾರಾಟ ಮಾಡಬೇಕು ಎಂಬ ಗುರಿ ನಿಗದಿಪಡಿಸಿದೆ. ಇಲ್ಲದೆ ಇದ್ದರೆ ವರ್ಗಾವಣೆ ಮಾಡುವದಾಗಿ, ಇಲ್ಲವೇ ಶಿಸ್ತು ಕ್ರಮ ಕೈಗೊಳ್ಳುವದಾಗಿ ಎಚ್ಚರಿಕೆ ನೀಡಿದೆ. ಆದರೆ ಅಕ್ರಮ‌ ಮದ್ಯ ಮಾರಾಟ ನಿಷೇಧದ ಕಾನೂನು ಇದ್ದರೂ ಸಹ ಪಟ್ಟಣ, ನಗರ ಹಾಗೂ ಹಳ್ಳಿಗಳಲ್ಲಿ ಮದ್ಯ ಮಾರಾಟದ ಅಕ್ರಮ ಅಂಗಡಿಗಳು ಎಲ್ಲಿಂದರಲ್ಲಿ ನಸಯಿ ಕೊಡಗಳಂತೆ ತಲೆ ಎತ್ತಿವೆ. 

ಹೀಗಾಗಿ ಸಹಜವಾಗಿಯೇ ಅಬಕಾರಿ ಆದಾಯ ಹೆಚ್ಚಾಗುತ್ತಿದೆ. ಈ ಅಕ್ರಮ ಮದ್ಯ ಮಾರಾಟ ಮಾಡುವ ದಂಧೆಯನ್ನು ಆರಂಭದಲ್ಲಿ ಸರಕಾರ ಗಂಭಿರವಾಗಿ ಪರಿಗಣಿಸಿ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಎಚ್ಚರಿಕೆ ನೀಡಿತ್ತಾದರೂ ನಂತರದಲ್ಲಿ ಆದಾಯ ಹೆಚ್ಚಾಯಿತು ಎಂಬ ಕಾರಣಕ್ಕೆ ಸುಮ್ಮನಾಗಿಬಿಟ್ಟಿದೆ. ಇದರ ಪರಿಣಾಮ ಪಟ್ಟಣ, ನಗರ ಹಾಗೂ ಹಳ್ಳಿಗಳಲ್ಲಿ ಅಕ್ರಮ ಮದ್ಯ ಮಾರಾಟ ಮಾಡುವ ದಂಧೆ ದಿನದಿಂದ ದಿನಕ್ಕೆ ವಿಸ್ತರಣೆ ಆಗುತ್ತಾ ಹೊರಟಿದೆ. ಹಾಗೆಂದು ಇಲ್ಲಿ ಮಾರಾಟ ಮಾಡುವ ಮದ್ಯ ಅಕ್ರಮವಲ್ಲ. ಮಾರಾಟ ಮಾತ್ರ ಅಕ್ರಮ. ಇದನ್ನು ತಡೆಗಟ್ಟಿದರೆ ಗ್ರಾಮೀಣ ಪ್ರದೇಶಗಳಲ್ಲಿ ಮದ್ಯ ಲಭ್ಯವಿಲ್ಲದಂತಾಗಿ ಗ್ರಾಮೀಣ ಪ್ರದೇಶದ ಜನರ ಆರೋಗ್ಯ ಸುಧಾರಿಸುತ್ತದೆ. ಆದರೂ ಸಹ ಹಳ್ಳಿಯಲ್ಲಿ ಅಕ್ರಮ ಮದ್ಯ ಮಾರಾಟ ತಡೆಯಲು ಅಧಿಕಾರಿಗಳು ಮತ್ತು ಸಿಬ್ಬಂದಿ ಗಂಭೀರ ಪ್ರಯತ್ನ ಮಾಡುತ್ತಲೇ  ಇಲ್ಲ. ದಾಳಿ ಮಾಡಿ ಅಕ್ರಮ ವಿರುದ್ಧ ಕ್ರಮ ಕೈಗೊಳ್ಳುತ್ತಿರುವದಾಗಿ ಕಣ್ಣೊರೆಸುವ ತಂತ್ರ ಮಾಡುತ್ತಿದ್ದಾರೆ. 

ಇತ್ತೀಚಿನ ದಿನಗಳಲ್ಲಿ ಯುವಕರು ಹಾಲಿನ ಸವಿಗಿಂತ ಹೆಂಡದ ರುಚಿ ಹೆಚ್ಚೆಚ್ಚು ಸವಿಯುತ್ತಿದ್ದಾರೆ:

ಮಿನಿ ಕಮರಿಪೇಟೆಯಾಗಿಸಿದ ಗುಂಡಿನ ಗಮ್ಮತ್ತು:  ಹೌದು, ಇದು ಸಾರ್ವಜನಿಕರನ್ನು ಕಾಡುವ ಪ್ರಶ್ನೆಯಾಗಿದೆ. 

ರಾಜ್ಯದ ಪಟ್ಟಣ ನಗರ ಹಾಗೂ ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಕೆಲವರು ಈ ಅಕ್ರ ಮ‌ಮ ಮದ್ಯ ಮಾರಾಟದ ಅಂಗಡಿಗಳ ಬಾಗಿಲು ತೆಗೆಯುವ ಮುನ್ನವೇ ಅಂಗಡಿಯತ್ತ ಮುಖ ಮಾಡಿ ಕುಳಿತಿರುತ್ತಾರೆ.

ಶುದ್ಧ ಕುಡಿಯುವ ನೀರಿನಷ್ಟೆ ಹೆಂಡ ! ರಾಜ್ಯದ ನಗರ ಮತ್ತು ಪಟ್ಟಣಗಳಲ್ಲಿ ಗುಜರಿ ಅಂಗಡಿಗಳಿಂದ ಮದ್ಯದ ಖಾಲಿ ಬಾಟಲಿ ತುಂಬಿದ ಸಿಕ್ಕಾಪಟ್ಟೆ ಲಾರಿಗಳು ತೆರಳುತ್ತಿವೆ. ಒಂದು ಲಾರಿಗೆ ಕನಿಷ್ಠ 12ಸಾವಿರ, ಒಟ್ಟು 72ಸಾವಿರ ಲೀಟರ್ ಖರ್ಚಾಗುತ್ತದೆ. ಇದು ಸರಕಾರಕ್ಕೆ ತೆರಿಗೆ ಪಾವತಿಸಿದ ಲೆಕ್ಕವಾದರೆ ಇದರ ಮೂರು ಪಟ್ಟು ಅನಧಿಕತ ಮಾರಾಟ ಮಾಡಲಾಗುತ್ತಿದೆ. ಮದ್ಯ ಖರ್ಚಾದ ಇಷ್ಟೊಂದು ಪ್ರಮಾಣದಲ್ಲಿ ಶುದ್ಧ ಕುಡಿಯುವ ನೀರು ಕುಡಿಯುವದಿಲ್ಲ ಎನ್ನಲಾಗುತ್ತದೆ. 

ಉದಾಹರಣೆಗೆ ರಾಜ್ಯದ ರೋಣ ತಾಲೂಕಿನಲ್ಲಿ ಒಟ್ಟು ಆರು ವೈನ್ ಸೆಂಟರ್ ಮತ್ತು ಒಂದು ಎಂಎಸ್‌ಐಎಲ್ ಮದ್ಯ ಮಾರಾಟ ಮಳಿಗೆ ಇವೆ. ಈ ಎಲ್ಲ ಅಂಗಡಿಗಳು ಸೇರಿ ಪ್ರತಿ ತಿಂಗಳು ಸರಾಸರಿ 28.892 ಬಲ್ಕ್ ಲೀಟರ್ ಅಂದರೆ 1,58,906 ಕ್ವಾಟರ್ ಬಾಟಲ್ (180ಎಂಎಲ್) (ಬಿಯರ್ ಹೊರತು ಪಡಿಸಿ) ಮಾರಾಟವಾಗುತ್ತಿದೆ. ಪ್ರತಿ ತಿಂಗಳು ಪ್ರತ್ಯೇಕ ವೈನ್ ಶಾಪ್‌ಗಳಲ್ಲಿ ಸರಾಸರಿ 4127 ಬಲ್ಕ್ ಲೀಟರ್ ಹಾಗೂ ಎಂಎಸ್‌ಐಎಲ್ ಮದ್ಯ ಮಾರಾಟ ಮಳಿಗೆ ಒಂದರಲ್ಲಿಯೇ 3393 ಬಲ್ಕ್ ಲೀಟರ್ ಸರಾಯಿ ಮಾರಾಟವಾಗುತ್ತಿದೆ. ಒಟ್ಟಾರೆ ದಿನಕ್ಕೆ ಒಂದು ಸಾವಿರ ಬಲ್ಕ್ ಲೀಟರ್ ಹೆಂಡ ಮದಿರೆ ಪ್ರಿಯರ ಹೊಟ್ಟೆ ಸೇರುತ್ತಿದೆ. ಇದರ ಜೊತೆ ಇಲ್ಲಿ ವ್ಯಾಪಕ ಮಾರಾಟವಾಗುವ ಕಳ್ಳಬಟ್ಟಿ ಸಾರಾಯಿಗೂ ಲೆಕ್ಕವಿಲ್ಲ.  

ಇದು ರಾಜ್ಯದ ಒಂದು ತಾಲೂಕಿನ ಹಣೆಬರಹ ಇಷ್ಟಾದರೆ ಉಳಿದ ತಾಲೂಕು ಹಾಗೂ ಜಿಲ್ಲೆಗಳ ಹಣೆಬರಹ ಎಷ್ಟಿರಬಹದು...? ನೀವೆ ಯೋಚಿಸಿ.  ರಾಜ್ಯದಲ್ಲಿ ಮುಂದೆ ಸಂಭವಿಸುವ ಜನರ ಅನಾರೋಗ್ಯ ಪೀಡಿತ ಜೀವನವನ್ನು ತಡೆಗಟ್ಟುವ ದೃಷ್ಟಿಯಿಂದ ಸರಕಾರ ಈ ಕೂಡಲೇ ಎಚ್ಚೆತ್ತುಕೊಂಡು, ಅಬಕಾರಿ ಇಲಾಖೆಗೆ ಮಾರಾಟದ ಗುರಿ (Sales Target) ಕೊಡುವುದನ್ನು ಬಿಟ್ಟು, ಅಕ್ರಮ‌ ಮದ್ಯ ಮಾರಾಟವನ್ನು ಕಟ್ಟುನಿಟ್ಟಾಗಿ ತಡೆಗಟ್ಟಬೇಕು. ಇಲ್ಲವಾದಲ್ಲಿ ಮುಂದೆ ಸಂಭವಿಸುವ ಸಮಾಜದ ಅಸ್ವಸ್ಥತೆಗೆ ಸರಕಾರವೇ ನೇರ ಹೋಣೆಯಾಗುತ್ತದೆ ಮತ್ತು ಆ ಪಾಪದ ಗುರಿಗೆ ಸರಕಾರ ನಡೆಸುವವರು ಬಲಿಯಾಗುತ್ತಾರೆ ಎಚ್ಚರ.

Post a Comment

أحدث أقدم
Loading...

Breaking News

ಭ್ರಷ್ಟರ ಬೇಟೆ
ಜಿಲ್ಲಾ ಸುದ್ದಿ is loading...